ಎಲ್ಲಾರು ಮಾಡುವುದು ಹೊಟ್ಟೆಗಾಗಿ

ಮಲಯ ಮಾರುತ

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ಪ ||

ನೆಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು

ಕೂಲಿಗಳ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ನಾಲ್ಕು ವೇದ ಪುರಾಣಶಾಸ್ತ್ರ ಪಂಚಾಗ ಹೇಳಿಕೊಂಡು

ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ || ೧ ||

ಸನ್ಯಾಸಿ ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ ನಾನಾ

ವೇಷ ಕೊಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ

ಉನ್ನತ ಕಾಗಿನೆಲೆ ಆದಿಕೇಶವನ ಅನುದಿನ ನೆನೆವುದು

ಭಕ್ತಿಗಾಗಿ ಪರ ಮುಕ್ತಿಗಾಗಿ ಪರ ಮುಕ್ತಿಗಾಗಿ || ೨ ||

ಮಲಯ ಮಾರುತ

ಚಿತ್ರ ನೋಡಿ